ಕ್ರೈಂ

ಮಂಗಳೂರು: 12ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಅರೆಸ್ಟ್

 

ಮಂಗಳೂರು: ನಗರದ ದಕ್ಷಿಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಡಕಾಯಿತಿ


ಪ್ರಕರಣ ದಾಖಲಾಗಿನಿಂದಲೂ ದಸ್ತಗಿರಿಗೆ ಸಿಗದೆ  ತಲಮರಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.


ಮಂಗಳೂರಿನ ಜಪ್ಪು ನಿವಾಸಿ‌ ಶಕೀಲ್(33)  ಬಂಧಿತ ಆರೋಪಿ.


ಪ್ರಕರಣ ದಾಖಲಾಗಿನಿಂದಲೂ ಆರೋಪಿ ಶಕೀಲ್ ತಲೆಮರೆಸಿಕೊಂಡಿದ್ದ. ಆದ್ದರಿಂದ ಆರೋಪಿ ಮೇಲೆ Absconding chargesheet ಸಲ್ಲಿಸಲಾಗಿತ್ತು. ಆರೋಪಿ ಸುಮಾರು 12ವರ್ಷಗಳಿಂದ ದಸ್ತಗಿರಿಗೆ ಸಿಗದೇ ತಲೆಮರಸಿಕೊಂಡಿದ್ದ. ನ್ಯಾಯಾಲಯವು ಪ್ರಕರಣವನ್ನು ಎಲ್‌ಪಿಸಿ ಪ್ರಕರಣವನ್ನಾಗಿ ಪರಿವರ್ತಿಸಿತ್ತು. ಇದೀಗ ಆರೋಪಿಯ ಇರುವಿಕೆಯ ಬಗ್ಗೆ ಖಚಿತ ಮಾಹಿತಿ ಪಡೆದುಕೊಂಡ ಪೊಲೀಸರು ನಂದಿಗುಡ್ಡ ಸರ್ಕಲ್ ಬಳಿಯಿಂದ ವಶಕ್ಕೆ ತೆಗೆದುಕೊಂಡಿದ್ದಾರೆ.