ಬಜಪೆ : ಕರಂಬಾರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಮವಸ್ತ್ರ ವಿತರಣಾ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಶಾಲೆಯ ಬಹುದೊಡ್ಡ ದಾನಿ, ಶಿಕ್ಷಣ ಪ್ರೇಮಿ ಶ್ರೀಯುತ ಆರ್ಥರ್ ಪಿರೇರಾ ಎರಡು ದಶಕಗಳ ಹಿಂದೆ ಈ ಶಾಲೆಯ ಪ್ರತೀ ಕಾರ್ಯಕ್ರಮದಲ್ಲೂ ನಾನು ಭಾಗಿಯಾಗುತ್ತಿದ್ದೆ. ಆ ಸಂದರ್ಭದಲ್ಲಿ ನಾನು ಈ ಶಾಲೆಯ ಬಗ್ಗೆ ಒಂದು ಕನಸನ್ನು ಕಂಡಿದ್ದೆ ಆ ಕನಸನ್ನು ನನಸಾಗಿಸಲು ನನ್ನಿಂದ ಸಾಧ್ಯವಾಗಲಿಲ್ಲ. ಆ ಕನಸನ್ನು ಹಳೆ ವಿದ್ಯಾರ್ಥಿ ಸಂಘ ಸತೀಶ್ ದೇವಾಡಿಗರ ಅವರ ನೇತೃತ್ವದಲ್ಲಿ ಸಾಧಿಸಿ ತೋರಿಸಿದೆ. ತಾನು ಕಂಡಿದ್ದ ಕನಸನ್ನು ನನಸಾಗಿಸಿದ ಹಳೆ ವಿದ್ಯಾರ್ಥಿ ಸಂಘಕ್ಕೆ ಮುಕ್ತ ಕಂಠದಿಂದ ಅಭಿನಂದನೆಯನ್ನು ಸಲ್ಲಿಸುತ್ತಾ ಒಳ್ಳೆಯ ಮನಸ್ಸುಗಳ ಸಾಧನೆಯಿಂದ ಸರ್ಕಾರಿ ಶಾಲೆಯ ಪರಿಸ್ಥಿತಿ ಬದಲಾಗಿದೆ ಎಂದು ಮಾರ್ಮಿಕವಾಗಿ ನುಡಿದರು.
ಅಂಬೇಡ್ಕರ್ ವಿಶ್ವೇಶ್ವರಯ್ಯರಂತವರು ಕಲಿತು ಬಂದದ್ದು ಇಂತಹ ಸರ್ಕಾರಿ ಶಾಲೆಯಿಂದಲೇ ಅವರುಗಳು ವಿದ್ಯಾರ್ಥಿಗಳಿಗೆ ಸ್ಪೂರ್ತಿಯಾಗಲಿ. ಈ ಸರಕಾರಿ ಶಾಲೆಯಿಂದಲೂ ಅಂಬೇಡ್ಕರ್ ವಿಶ್ವೇಶ್ವರಯ್ಯರಂತವರು ಹೊರಹೊಮ್ಮಲಿ ಎಂದು ದಿಕ್ಸೂಚಿಯ ಮಾತನಾಡಿದರು.
ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಶ್ರೀ ಗುಣಪಾಲ್ ದೇವಾಡಿಗ ರವರು ಮಾತಾಡುತ್ತಾ, ನಾವು ಯಾವುದೇ ಸಾಧನೆಯನ್ನು ಮಾಡಬೇಕಾದರೆ ಅದರ ಹಿಂದೆ ಹಿರಿಯರ ಕನಸುಗಳು ಇರುತ್ತೆ. ಅವರ ಕನಸುಗಳೇ ಈ ಸಾಧನೆಗಳಿಗೆ ಆಶೀರ್ವಾದ ಎಂದು ಆರ್ಥರ್ ರವರ ಮಾತಿಗೆ ಪೂರಕವಾಗಿ ಭಾವನಾತ್ಮಕವಾಗಿ ನುಡಿದರು.
ಹಳೆ ವಿದ್ಯಾರ್ಥಿ ಸಂಘದ ಶಿಕ್ಷಣ ಕಾರ್ಯದರ್ಶಿ ಶ್ರೀ ಕೃಷ್ಣಾನಂದ ಡಿ.ಯವರು ಮಾತಾಡುತ್ತಾ ಸರಕಾರದ ನಿರ್ಲಕ್ಷ ಮತ್ತು ಪೋಷಕರ ಆಂಗ್ಲ ಮಾಧ್ಯಮದ ವ್ಯಾಮೋಹದಿಂದ ಸರಕಾರಿ ಶಾಲೆಗಳೆಲ್ಲವೂ ಮುಚ್ಚುತ್ತಿರುವ ಸನ್ನಿವೇಶದಲ್ಲಿ ಹಳೆ ವಿದ್ಯಾರ್ಥಿ ಸಂಘದ ಮುತುವರ್ಜಿಯಿಂದಾಗಿ ಈ ಶಾಲೆಯಲ್ಲಿ 50ರ ಒಳಗಿದ್ದ ವಿದ್ಯಾರ್ಥಿಗಳ ಸಂಖ್ಯೆ ಇಂದು 500ರ ಗಡಿ ತಲುಪಿರುವುದು ಬಹಳ ಹೆಮ್ಮೆಯ ವಿಚಾರ ಎಂದು ನುಡಿಯುತ್ತಾ ಪೋಷಕರು ಸರ್ಕಾರಿ ಶಾಲೆಗಳ ಅಭಿವೃದ್ಧಿಯಲ್ಲಿ ಕೈಜೋಡಿಸಿದರೆ ಸರಕಾರಿ ಶಾಲೆಗಳು ಖಾಸಗಿ ಶಾಲೆಗಳಿಗೆ ಸರಿಸಮವಾಗಿ ಗುಣಮಟ್ಟದ ಅತ್ಯುತ್ತಮ ಶಿಕ್ಷಣ ನೀಡಲು ಸಾಧ್ಯ ಎಂದು ಪೋಷಕರಿಗೆ ಕರೆಕೊಟ್ಟರು.
*ಅಧ್ಯಕ್ಷತೆ ವಹಿಸಿದ್ದ ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಶ್ರೀಯುತ ಸತೀಶ್ ದೇವಾಡಿಗ* ರವರು ಮಾತಾಡುತ್ತಾ ಯಾವುದೇ ಒಳ್ಳೆಯ ಕೆಲಸಗಳನ್ನು ಮಾಡಬೇಕಾದರೆ ಹಲವಾರು ಟೀಕೆ ಟಿಪ್ಪಣಿಗಳು ಬರುವುದು ಸಹಜ ಇಂದು ಅಂತಹ ಟೀಕೆ-ಟಿಪ್ಪಣಿ-ಅಪಪ್ರಚಾರಗಳು ನಮ್ಮನ್ನು ಸದೃಢವಾಗಿ ಈ ಸರ್ಕಾರಿ ಶಾಲೆಯನ್ನು ಉತ್ತಮ ಪ್ರಗತಿಯತ್ತ ಕೊಂಡೊಯ್ಯುವಲ್ಲಿ ಬೆನ್ನು ತಟ್ಟಿ ಪ್ರೋತ್ಸಾಹಿಸಿದಂತಾಗಿದೆ ಎಂದರು.
ಈ ಸಂದರ್ಭದಲ್ಲಿ ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ಸುಮಾರು 1.32 ಲಕ್ಷ ಮೌಲ್ಯದ ಸಮವಸ್ತ್ರವನ್ನು ಧಾನಿಗಳ ಸಹಕಾರದಿಂದ ವಿತರಿಸಲಾಯಿತು.
ಕಾರ್ಯಕ್ರಮದ ವೇದಿಕೆಯಲ್ಲಿ ಫ್ಲವರ್ ಡೆಕೋರೇಷನ್ ಸಂಘದ ಅಧ್ಯಕ್ಷರಾದ ಅಕ್ಷಿತ್ ಕೊಟ್ಟಾರಿ, ಶಾಲಾ ಮುಖ್ಯೋಪಾಧ್ಯಾಯನಿ ಶ್ರೀಮತಿ ಸೀತಮ್ಮ, ಹಳೆ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷರಾದ ರಾಕೇಶ್ ಕುಂದರ್, ಕಾರ್ಯದರ್ಶಿಯಾದ ಪ್ರವೀಣ್ ಆಚಾರ್ಯ, ಸದಸ್ಯರುಗಳಾದ ಅಕ್ಷಿತ್ ಲೋಕೇಶ್, ಉಮೇಶ್, ನಿಶಾ ಕರಂಬಾರು, ಪದ್ಮನಾಭ ಅಮೀನ್, ಶ್ರೀ ಶಂಕರ್ ಶೆಟ್ಟಿ ಗಂಡೊಟ್ಟು ಉಪಸ್ಥಿತರಿದ್ದರು, ಶಾಲಾ ಮುಖ್ಯೋಪಾಧ್ಯಾಯನಿಯಾದ ಶ್ರೀಮತಿ ಸೀತಮ್ಮ ಸ್ವಾಗತಿಸಿದರು, ಶಿಕ್ಷಕಿ ಶ್ರೀಮತಿ ಬಬಿತ ಕಾರ್ಯಕ್ರಮವನ್ನು ನಿರೂಪಿಸಿದರು, ಶ್ರೀಮತಿ ಪವಿತ್ರ ವಂದನಾರ್ಪಣೆಗೈದರು.

