ಬೆಂಗಳೂರು: ಸಿಲಿಕಾನ್ ಸಿಟಿಯ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (KIA) ಟೇಕಾಫ್ ಆಗಲು ಸಜ್ಜಾಗುತ್ತಿದ್ದ ವಿಮಾನವೊಂದರಲ್ಲಿ ಬಾಂಬ್ ಬೆದರಿಕೆ ಪತ್ರ ಪತ್ತೆಯಾಗಿದ್ದು, ಇಡೀ ಆವರಣದಲ್ಲಿ ಕೆಲಕಾಲ ಭಾರಿ ಆತಂಕ ಮತ್ತು ದಿಗಿಲು ಸೃಷ್ಟಿಸಿದ ಘಟನೆ ನಡೆದಿದೆ. ಬೆಂಗಳೂರಿನಿಂದ ಗುಜರಾತ್‌ನ ಅಹಮದಾಬಾದ್‌ಗೆ ಹೊರಡಲು ಸಿದ್ಧವಾಗುತ್ತಿದ್ದ ಇಂಡಿಗೋ ಏರ್‌ಲೈನ್ಸ್ ಸಂಸ್ಥೆಗೆ ಸೇರಿದ ವಿಮಾನದಲ್ಲಿ ಈ ಆಘಾತಕಾರಿ ಸಂದೇಶ ಬೆಳಕಿಗೆ ಬಂದಿದೆ.

ಬೆಂಗಳೂರು-ಅಹಮದಾಬಾದ್ ಮಾರ್ಗದ 6E-6423 ಸಂಖ್ಯೆಯ ಇಂಡಿಗೋ ವಿಮಾನದ ಕ್ರೀವ್ ಲ್ಯಾವೆಟರಿ (ಶೌಚಾಲಯ) ಭಾಗದಲ್ಲಿ ಸಣ್ಣ ಕಾಗದದ ಚೀಟಿಯೊಂದು ಪತ್ತೆಯಾಗಿತ್ತು. ಸದ್ರಿ ಪೇಪರ್‌ನಲ್ಲಿ 'Dont go Bomb hi please' (ಹೋಗಬೇಡಿ, ಇಲ್ಲಿ ಬಾಂಬ್ ಇದೆ ದಯವಿಟ್ಟು) ಎಂದು ಇಂಗ್ಲಿಷ್‌ನಲ್ಲಿ ಬರೆದಿಡಲಾಗಿತ್ತು. ಇದನ್ನು ಗಮನಿಸಿದ ವಿಮಾನದ ಸಿಬ್ಬಂದಿ ತಕ್ಷಣವೇ ಉನ್ನತಾಧಿಕಾರಿಗಳಿಗೆ ಹಾಗೂ ಭದ್ರತಾ ಪಡೆಯ ಗಮನಕ್ಕೆ ತಂದಿದ್ದಾರೆ.

ಪ್ರಯಾಣಿಕರ ತುರ್ತು ಸ್ಥಳಾಂತರ - ತಪಾಸಣೆ:
ಬಾಂಬ್ ಇರುವ ಕುರಿತು ಮಾಹಿತಿ ಸಿಗುತ್ತಿದ್ದಂತೆಯೇ ತಕ್ಷಣವೇ ಅಲರ್ಟ್ ಆದ ವಿಮಾನ ನಿಲ್ದಾಣದ ಕೇಂದ್ರ ಕೈಗಾರಿಕಾ ಭದ್ರತಾ ಪಡೆ (CISF) ಹಾಗೂ ಬಾಂಬ್ ಪತ್ತೆ ದಳದ ಸಿಬ್ಬಂದಿ, ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರನ್ನು ಸುರಕ್ಷಿತವಾಗಿ ಕೆಳಗೆ ಇಳಿಸಿದ್ದಾರೆ. ತದನಂತರ ವಿಮಾನವನ್ನು ಸಂಪೂರ್ಣವಾಗಿ ಪ್ರತ್ಯೇಕಿಸಿ ತೀವ್ರ ಶೋಧ ಕಾರ್ಯ ನಡೆಸಲಾಯಿತು. ಆದರೆ, ಸುದೀರ್ಘ ತಪಾಸಣೆಯ ಬಳಿಕ ಯಾವುದೇ ಸ್ಫೋಟಕ ಅಥವಾ ಶಂಕಾಸ್ಪದ ವಸ್ತುಗಳು ಪತ್ತೆಯಾಗದ ಕಾರಣ, ಇದೊಂದು ಕಿಡಿಗೇಡಿಗಳು ಮಾಡಿರುವ ಹುಸಿ (ಫೇಕ್) ಬಾಂಬ್ ಬೆದರಿಕೆ ಎಂಬುದು ಅಧಿಕೃತವಾಗಿ ಖಚಿತಗೊಂಡಿದೆ.

ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲು:
ಈ ಹುಸಿ ಬಾಂಬ್ ಬೆದರಿಕೆ ಸಂದೇಶದಿಂದಾಗಿ ವಿಮಾನಯಾನ ಸಂಸ್ಥೆಗೆ ಹಾಗೂ ಪ್ರಯಾಣಿಕರಿಗೆ ಭಾರಿ ತೊಂದರೆಯಾಗಿದ್ದು, ವಿಮಾನ ನಿಲ್ದಾಣದಲ್ಲಿ ಕೆಲಕಾಲ ವಿಮಾನಗಳ ಸಂಚಾರದಲ್ಲೂ ವ್ಯತ್ಯಯ ಉಂಟಾಗಿತ್ತು. ಪ್ರಸ್ತುತ ಈ ಕೃತ್ಯ ಎಸಗಿದ ಅಪರಿಚಿತ ಕಿಡಿಗೇಡಿಯ ವಿರುದ್ಧ ಇಂಡಿಗೋ ಸಂಸ್ಥೆಯು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಪೊಲೀಸ್ ಠಾಣೆಯಲ್ಲಿ ಅಧಿಕೃತ ದೂರು ನೀಡಿದ್ದು, ಪೊಲೀಸರು ಆರೋಪಿಯ ಪತ್ತೆಗಾಗಿ ತನಿಖೆ ಆರಂಭಿಸಿದ್ದಾರೆ.