ದೇಶ ವಿದೇಶ

ಸಂಸತ್‌ಚಲೋ ಪ್ರತಿಭಟನಾಕಾರರ ಜೊತೆ ಜೆ.ಪಿ.ನಡ್ಡಾ ಮಾತುಕತೆ? ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ?


ಸಂಸತ್‌ಚಲೋ ಪ್ರತಿಭಟನಾಕಾರರ ಜೊತೆ ಜೆ.ಪಿ.ನಡ್ಡಾ ಮಾತುಕತೆ? ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ?

ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯ  ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಒತ್ತಾಯಿಸಿ ಸಂಸತ್ ಚಲೋ ಹೋರಾಟದ ತೀವ್ರತೆ ಮುಂದುವರಿಯುತ್ತಿದ್ದಂತೆ,  ಪ್ರಧಾನಿ‌ ಮೋದಿ ಸಂಸತ್ತಿನಿಂದ ಹೊರಹೋದ ಘಟನೆ ನಡೆದಿದೆ.  ಈ ನಡುವೆ ಪ್ರತಿಭಟನೆಗೆ  ಮಣಿದ ಕೇಂದ್ರ ಸರಕಾರ ಪ್ರತಿಭಟನಾಕಾರರನ್ನು ಮಾತುಕತೆಗೆ ಆಹ್ವಾನಿಸಿದೆ. ಸಿಜೆಪಿ ಜೊತೆ ಜೆ.ಪಿ.ನಡ್ಡಾ ಮಾತುಕತೆಗೆ ನಡೆಸಲಿದ್ದಾರೆ!? ಅದೇ ರೀತಿ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯ ಹೊಣೆ ಹೊತ್ತು ಧರ್ಮೇಂದ್ರ ಪ್ರಧಾನ್ ರಾಜಿನಾಮೆ ನೀಡುವ ಸಾಧ್ಯತೆ ದಟ್ಟವಾಗುತ್ತಿದೆ.