ಕ್ರೈಂ

Farangipete: ಕೆನರಾ ಬ್ಯಾಂಕ್ ಕಳವು ಯತ್ನ ಪ್ರಕರಣ- ಆರೋಪಿ ಅರೆಸ್ಟ್

 




ಬಂಟ್ವಾಳ: ಇಲ್ಲಿನ ಗ್ರಾಮಾಂತರ ಠಾಣಾ ವ್ಯಾಪ್ತಿಯ ಪರಂಗಿಪೇಟೆ ಎಂಬಲ್ಲಿ ಕಾರ್ಯಚರಿಸುತ್ತಿದ್ದ ಕೆನರಾ ಬ್ಯಾಂಕ್‌ನ ಮೇಲ್ಛಾವಣಿಯನ್ನು ಕೊರೆದು ಒಳಪ್ರವೇಶಿಸಿ ಹಣ ಮತ್ತು ಚಿನ್ನಾಭರಣಗಳನ್ನು ಕಳವಿಗೆ ಯತ್ನಿಸಿರುವ ಪ್ರಕರಣದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. 


ಬಂಟ್ವಾಳ ಮಾರಿಪಳ್ಳ ನಿವಾಸಿ ಮೊಹಮ್ಮದ್  ಶಾಖಿರ್ (33) ಬಂಧಿತ ಆರೋಪಿ.



ಘಟನೆಗೆ ಸಂಬಂಧಿಸಿದಂತೆ, 2026ರ ಜೂನ್ 13ರಂದು ಅ.ಕ್ರ: 106/2026 ಕಲಂ:331(3), 331(4), 305(a),62 BNS 2023 ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗಿತ್ತು. ಪ್ರಕರಣದ ಆರೋಪಿಗಳ ಪೈಕಿ ಮೊಹಮ್ಮದ್ ಶಾಖಿರ್ ಎಂಬಾತನನ್ನು ಬಂಟ್ವಾಳ ಗ್ರಾಮಾಂತರ ಠಾಣಾ ಪೊಲೀಸರು ದಸ್ತಗಿರಿ ಮಾಡಿ ವಿಚಾರಣೆ ನಡೆಸುತ್ತಿದ್ದಾರೆ. ತನಿಖೆ ಮುಂದುವರೆದಿದೆ.