ಮಂಗಳೂರು: ನಗರದ ಲಾಲ್ ಬಾಗ್ ನಲ್ಲಿರುವ ಮಂಗಳೂರು ಮಹಾನಗರ ಪಾಲಿಕೆಯ ಮುಂಭಾಗದಲ್ಲಿ ನಿನ್ನೆ ಬೆಳಿಗ್ಗೆಯಿಂದ ಇಂದು ಬೆಳಗ್ಗಿನವರೆಗೆ 24 ಗಂಟೆಗಳ ಕಾಲ ಹಗಲು ರಾತ್ರಿ ಧರಣಿ ಕುಳಿತ ಸಂಡೆ ಬಝಾರ್ ಮತ್ತು ಬೀದಿ ಬದಿ ವ್ಯಾಪಾರಸ್ಥರು. ತಮ್ಮ ಜೀವನೋಪಾಯಕ್ಕಾಗಿ ಇರುವ ಬೀದಿ ಬದಿ ವ್ಯಾಪಾರಕ್ಕೆ ಮುಕ್ತ ಅವಕಾಶ ನೀಡಬೇಕೆನ್ನುವ ಬೇಡಿಕೆ ಇಟ್ಟು ನೂರಾರು ವ್ಯಾಪಾರಸ್ಥರು ಕಳೆದ 24 ಗಂಟೆಗೂ ಮೇಲ್ಪಟ್ಟು ಧರಣಿ ಕುಳಿತರೂ ಪಾಲಿಕೆಯ ಯಾವುದೇ ಅಧಿಕಾರಿಗಳು ಧರಣಿ ಸ್ಥಳಕ್ಕೆ ಆಗಮಿಸದಿರುವುದರಿಂದ ಆಕ್ರೋಶಗೊಂಡ ವ್ಯಾಪಾರಸ್ಥರು ಇಂದು ಪಾಲಿಕೆಯ ಆಡಳಿತಾಧಿಕಾರಿಗಳ ಕಛೇರಿಯ ಎದುರು ಕುಳಿತು ತಮ್ಮ ಧರಣಿಯನ್ನು ಮತ್ತಷ್ಟು ತೀವ್ರಗೊಳಿಸಿದ್ದಾರೆ. ತಮಗೆ ನ್ಯಾಯ ಸಿಗುವವರೆಗೂ ಇಲ್ಲಿಂದ ಕದಡುವುದಿಲ್ಲವೆಂದು ವ್ಯಾಪಾರಸ್ಥರು ಪಟ್ಟುಹಿಡಿದಿದ್ದಾರೆ.
