ಕ್ರೈಂ

ಧರ್ಮಸ್ಥಳ ಪ್ರಕರಣ- ಎಸ್ಐಟಿಯಿಂದ ನ್ಯಾಯಾಲಯಕ್ಕೆ ತಲೆಬುರುಡೆ, ಮೂಳೆ ಸಹಿತ 7000 ಪುಟಗಳ ವರದಿ ಸಲ್ಲಿಕೆ

 



ಬೆಳ್ತಂಗಡಿ: ತಾಲೂಕಿನ ಧರ್ಮಸ್ಥಳ ಗ್ರಾಮದಲ್ಲಿ ಹಲವಾರು ಮೃತದೇಹ ಹೂತಿಡಲಾಗಿದೆ ಎಂದು ಹೇಳಲಾಗಿರುವ ಪ್ರಕರಣದಲ್ಲಿ ತನಿಖೆ ನಡೆಸಿದ ಎಸ್ಐಟಿ ತಂಡ ವಶಪಡಿಸಿದ್ದ ಸೊತ್ತುಗಳ ಸಹಿತ ಅಂತಿಮ ವರದಿಯನ್ನು ಬೆಳ್ತಂಗಡಿ ನ್ಯಾಯಾಲಯಕ್ಕೆ ಬುಧವಾರ ಮಧ್ಯಾಹ್ನ ಸಲ್ಲಿಸಿದೆ.


ಎಸ್ಐಟಿ ಅಧಿಕಾರಿಗಳು ಮಧ್ಯಾಹ್ನ ವೇಳೆಗೆ ಬೆಳ್ತಂಗಡಿ ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಸಲು ಆಗಮಿಸಿದೆ‌‌. ಧರ್ಮಸ್ಥಳ ಪ್ರಕರಣದಲ್ಲಿ ತನಿಖೆ ನಡೆಸಿದ ಎಸ್ಐಟಿ ಅಧಿಕಾರಿಗಳು ಒಂದು ವರ್ಷದ ಬಳಿಕ ಒಟ್ಟು 12 ಫೈಲ್‌ಗಳನ್ನು ಒಳಗೊಂಡಿರುವ 7ಸಾವಿರಕ್ಕೂ ಅಧಿಕ ಪುಟಗಳ ವರದಿಯನ್ನು ಸಲ್ಲಿಸಿದೆ‌‌. ಈ ವರದಿಯೊಂದಿಗೆ ವಿಡಿಯೋ ಸ್ಟೆಟ್‌ಮೆಂಟ್ ಮಾಡಿದ 4TB Hard disk ಅನ್ನು ನ್ಯಾಯಾಲಯಕ್ಕೆ ಸಲ್ಲಿಸಿದೆ‌.


ಈ ವರದಿಗಾಗಿ ಒಟ್ಟು 255 ಸಾಕ್ಷಿಗಳ ಹೇಳಿಕೆಗಳನ್ನು ಪಡೆದುಕೊಳ್ಳಲಾಗಿದೆ. ಅಲ್ಲದೆ ಮಾನವನ ಬುರುಡೆ, ಅಸ್ಥಿಪಂಜರ, ಮೊಬೈಲ್ ಫೋನ್‌ಗಳು, ದಾಖಲೆಗಳು  ಸೇರಿದಂತೆ ಎಫ್ಎಸ್‌ಗೆ ಹೋಗಿ ಬಂದ ಎಲ್ಲಾ ವಸ್ತುಗಳನ್ನು ಬೆಳ್ತಂಗಡಿಕ ನ್ಯಾಯಾಲಯಕ್ಕೆ ಎಸ್ಐಟಿ ಅಧಿಕಾರಿಗಳೂ ಹಾಜರುಪಡಿಸಿದ್ದಾರೆ‌.  ಸಲ್ಲಿಕೆಯಾಗಿದೆ‌. 


ವರದಿ ಸಲ್ಲಿಕೆ‌ ಸಂದರ್ಭ ನ್ಯಾಯಾಲಯದ ಆವರಣಕ್ಕೆ ಚಿನ್ನಯ್ಯನೂ ತನ್ನ ಪತ್ನಿಯೊಂದಿಗೆ ನ್ಯಾಯಾಲಯದ ಆವರಣಕ್ಕೆ ಆಗಮಿಸಿದ್ದ. ಧರ್ಮಸ್ಥಳ ಬುರುಡೆ ಪ್ರಕರಣದ ಕುರಿತು ಇಂದು ನ್ಯಾಯಾಲಯದಲ್ಲಿ ಚಿನ್ನಯ್ಯನ ವಿಚಾರಣೆ ಇತ್ತು‌‌. ವಿಚಾರಣೆ ನಡೆಸಿದ ನ್ಯಾಯಾಲಯವು ಆಗಸ್ಟ್ 29ಕ್ಕೆ ಚಿನ್ನಯ್ಯನ ವಿಚಾರಣೆ ಮುಂದೂಡಿದೆ.