ಮಂಗಳೂರು ಪಾಂಡೇಶ್ವರದ ಪ್ರಧಾನ ಅಂಚೆ ಕಛೇರಿಯಲ್ಲಿ ರಾತ್ರಿ 8ರವರೆಗೆ ಸೇವೆ ವಿಸ್ತರಣೆ : ಅಂಚೆ ಇಲಾಖೆಯ ಮಹತ್ವದ ನಿರ್ಧಾರ
ಮಂಗಳೂರು
ಪ್ರಧಾನ ಅಂಚೆ ಕಛೇರಿಯು(ಪಾಂಡೇಶ್ವರ) ಸಾರ್ವಜನಿಕರ
ಅನುಕೂಲಕ್ಕಾಗಿ ಇನ್ನು ಮುಂದೆ ಸೋಮವಾರದದಿಂದ ಶನಿವಾರದವರೆಗೆ ಪ್ರತೀ ದಿನ ಬೆಳಿಗ್ಗೆ 8 ಗಂಟೆಯಿಂದ
ರಾತ್ರಿ 9ರವರೆಗೆ ಕಾರ್ಯಾಚರಿಸಲಿದೆ. ಈ ಅವಧಿಯಲ್ಲಿ ಸ್ಪೀಡ್ ಪೋಸ್ಟ್, ಪಾರ್ಸೆಲ್, ಆಧಾರ್ ನೋಂದಣೆ
ಮತ್ತು ನವೀಕರಣ ಸೇವೆಗಳು ಹಾಗೂ ಅಂಚೆ ಉಳಿತಾಯ ಬ್ಯಾಂಕ್ ಸೇವೆಗಳು(POSB) ಲಭ್ಯವಿರುತ್ತದೆ.
ಗ್ರಾಹಕರು
ಪ್ರಮುಖವಾಗಿ ಸುಕನ್ಯಾ ಸಮೃದ್ಧಿ, ರಾಷ್ಟ್ರೀಯ ಉಳಿತಾಯ ಪತ್ರ, ಕಿಶಾನ್ ವಿಕಾಸ ಪತ್ರ, ಮಾಸಿಕ ಆದಾಯ
ಯೋಜನೆ, ಅಂಚೆ ಉಳಿತಾಯ ಬ್ಯಾಂಕ್, ಜನಸುರಕ್ಷಾ ಯೋಜನೆಗಳು, ವಿವಿಧ ಸಣ್ಣ ಉಳಿತಾಯ ಯೋಜನೆಗಳ ಸೇವೆ,
ಸಾರ್ವಜನಿಕ ಭವಿಷ್ಯ ನಿಧಿ ಇತ್ಯಾದಿ ಸೇವೆಗಳು ಸಾರ್ವಜಿನಿಕರ ಸೇವೆಗೆ ಲಭ್ಯವಿರುತ್ತದೆ. ಆದರೆ ಈ ವಿಸ್ತರಣೆಗೊಂಡ
ಸಣಜೆ ಸೇವೆಯನ್ನು ಪಡೆಯಲು SAS/MPKBY
ಏಜೆಂಟ್ ಗಳಿಗೆ ಅವಕಾಶವಿಲ್ಲ.
ತರಬೇತಿ
ಪಡೆದ ಸಿಬ್ಬಂದಿಗಳು ಅಂತರಾಷ್ಟೀಯ ಪಾರ್ಸೆಲ್ ಕಳುಹಿಸುವ ಬಗ್ಗೆ ಗ್ರಾಹಕರಿಗೆ ಮಾಹಿತಿ ನೀಡಲಿದ್ದಾರೆ.
ಅಂತರಾಷ್ಟ್ರೀಯ ಪಾರ್ಸೆಲ್ ಬಕ್ಕಿಂಗ್ ಗಾಗಿ ವಿಶೇಷ ಅಂತರಾಷ್ಟ್ರೀಯ ಬುಕ್ಕಿಂಗ್ ಕೌಂಟರ್ ಆರಂಬಿಸಲಾಗಿದೆ.
ಪಾರ್ಸೆಗಳನ್ನು ಸುರಕ್ಷಿತವಾಗಿ ಕಳುಹಿಸಲು ಅಂಚೆ ಕಛೇರಿಯಲ್ಲಿ ವಿಶೇಷ ಪಾರ್ಸೆಲ್ ಪ್ಯಾಕೆಜಿಂಗ್ ಘಟಕ ಲಭ್ಯವಿದೆ.
ಭಾನುವಾರ ಬೆಳಿಗ್ಗೆ 9ರಿಂದ ಸಂಜೆ 5ರವರೆಗೆ ಸೇವೆಗಳು ಲಭ್ಯ.
ಗ್ರಾಹಕರ,
ಸಾರ್ವಜನಿಕರ, ಉದ್ಯೋಗಿಗಳ ಅನುಕೂಲಕ್ಕಾಗಿ ಇನ್ನು ಮುಂದೆ ಪ್ರತೀ ಭಾನುವಾರ ಬೆಳಿಗ್ಗೆ 9ರಿಂದ ಸಂಜೆ
5ರವರೆಗೆ ಆಧಾರ್, ಸ್ಪೀಡ್ ಪೋಸ್ಟ್, ಪಾರ್ಸೆಲ್ ಬುಕ್ಕಿಂಗ್ ಸೇವೆಗಳು ಲಭ್ಯವಿರುತ್ತದೆ ಎಂದು ಹಿರಿಯ
ಅಂಚೆ ಅಧೀಕ್ಷಕ ಜೋಸೆಫ್ ರಾಡ್ರಿಗಸ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.