ತೀವ್ರ ಕೋಮುವಾದೀಕರಣದಲ್ಲಿ ಯಕ್ಷಗಾನದ ಪಾತ್ರ, ಮುಸ್ಲಿಮ್ ದ್ವೇಷವನ್ನು ಸಮಾಜದಲ್ಲಿ ಆಳವಾಗಿ ಬೇರೂರಿಸುವುದರಲ್ಲಿ ಕಲೆ (ಯಕ್ಷಗಾನ), ಕಲಾವಿದರ ಬಳಕೆ, ಹಿಂದುತ್ವದ ರಾಜಕಾರಣದ ಮೇಲುಗೈ: “ಅಳವು ಅರಿಯದ ಭಾಷೆ” ಪುಸ್ತಕದ ವಿಚಾರ ಮಥನ

 

ಕರಾವಳಿ ಕರ್ನಾಟಕದ 3 ದಶಕದ ಸಾಂಸ್ಕೃತಿಕ ಪಲ್ಲಟಗಳು, ತೀವ್ರ ಕೋಮುವಾದೀಕರಣದಲ್ಲಿ ಯಕ್ಷಗಾನದ ಪಾತ್ರ, ಮುಸ್ಲಿಮ್ ದ್ವೇಷವನ್ನು ಸಮಾಜದಲ್ಲಿ ಆಳವಾಗಿ ಬೇರೂರಿಸುವುದರಲ್ಲಿ ಕಲೆ (ಯಕ್ಷಗಾನ), ಕಲಾವಿದರ ಬಳಕೆ, ಹಿಂದುತ್ವದ ರಾಜಕಾರಣದ ಮೇಲುಗೈ. ಮೊದಲಾದ ಗಂಭೀರ  ವಿಷಯಗಳ ಕುರಿತು ದಾಖಲೆಗಳ ಸಹಿತ ಡಾ. ನಿತ್ಯಾನಂದ ಬಿ ಶೆಟ್ಟಿಯವರು (ತುಮಕೂರು ವಿ ವಿ) ಬರೆದಿರುವ ಆಸಕ್ತಿಪೂರ್ಣ ಮಾಹಿತಿಗಳನ್ನು ಒಳಗೊಂಡ ಪುಸ್ತಕ "ಅಳವು ಅರಿಯದ ಭಾಷೆ"


ಈ ಕೃತಿಯ ಹಿನ್ನಲೆಯಲ್ಲಿ ಕರಾವಳಿ ಕರ್ನಾಟಕದ ಸಾಂಸ್ಕೃತಿಕ ರಾಜಕಾರಣದ ಕುರಿತು ಒಂದು ದಿನದ ವಿಚಾರ ಮಥನವನ್ನು ಆಗಸ್ಟ್ 1, 2026 (ಬೆಳಿಗ್ಗೆ 10.00 ರಿಂದ ಸಂಜೆ 5.00) ರಂದು ಮಂಗಳೂರಿನ ಕಲಾಂಗಣ ದಲ್ಲಿ ಅಭಿಮತ ಮಂಗಳೂರು - ಭಗತ್ ಸಿಂಗ್ ಮೆಮೋರಿಯಲ್ ಟ್ರಸ್ಟ್ ಹಮ್ಮಿಕೊಂಡಿದೆ.


ಕರಾವಳಿ ಕರ್ನಾಟಕದ ಬಹುಮುಖ್ಯ ವಿಚಾರವಂತರು, ಬರಹಗಾರರು, ವಿದ್ವಾಂಸರು ಈ  ಚಿಂತನ - ಮಂಥನದಲ್ಲಿ ಒಟ್ಟು ಸೇರಲಿದ್ದಾರೆ. ನಾಡಿನ ಹಲವು ಯುವ ಚಿಂತಕರು, ವಿಶ್ಲೇಷಕರು ಅಂದು ನಮ್ಮೊಂದಿಗೆ ಇರಲಿದ್ದಾರೆ‌. ಆಸಕ್ತರು ಹೆಸರು ನೊಂದಾಯಿಸಿಕೊಳ್ಳಿ. ಪುಸ್ತಕವನ್ನು ಖರೀದಿಸಿ ಓದಿ ಕೊಂಡು ಬನ್ನಿ. ಈ ಕಾಲಘಟ್ಟದ ಒಂದು ಮಹತ್ವ ಪೂರ್ಣ ಚರ್ಚೆಯಲ್ಲಿ ಪಾಲ್ಗೊಳ್ಳುವಂತೆ ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.