ಪ್ರಾದೇಶಿಕ

ರಾಹುಲ್ ಗಾಂಧಿಗೆ ಕೊಲೆ ಬೆದರಿಕೆ ಒಡ್ಡಿದ್ದ ಶಾಸಕ ಯಶ್ಪಾಲ್ ಸುವರ್ಣಗೆ BNSS ಸೆಕ್ಷನ್ 35(3) ನೋಟಿಸ್ ನೀಡಲು ಬಂದಿದ್ದ ಪೊಲೀಸ್ ಅಧಿಕಾರಿ ಸೆಲ್ಯೂಟ್ ಹೊಡೆದಿರುವುದು, ಎಫ್​ಐಆರ್ ತನಿಖೆಯ ಬಗೆಗೆ ಅನುಮಾನ ಮೂಡಿಸುತ್ತದೆ.

ರಾಹುಲ್ ಗಾಂಧಿಗೆ ಕೊಲೆ ಬೆದರಿಕೆ ಒಡ್ಡಿದ್ದ ಶಾಸಕ ಯಶ್ಪಾಲ್ ಸುವರ್ಣಗೆ BNSS ಸೆಕ್ಷನ್ 35(3) ನೋಟಿಸ್ ನೀಡಲು ಬಂದಿದ್ದ ಪೊಲೀಸ್ ಅಧಿಕಾರಿ ಸೆಲ್ಯೂಟ್ ಹೊಡೆದಿರುವುದು, ಎಫ್​ಐಆರ್ ತನಿಖೆಯ ಬಗೆಗೆ ಅನುಮಾನ ಮೂಡಿಸುತ್ತದೆ.

🖋️ನವೀನ್ ಸೂರಿಂಜೆ

ಗೃಹ ಸಚಿವ ಪ್ರಿಯಾಂಕ್  ಖರ್ಗೆಯವರು ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಬೇಕು. 'ವಿಚಾರಣೆ ಎದುರಿಸುತ್ತಿರುವ ಶಾಸಕ, ಸಂಸದರಿಗೆ ವಿಚಾರಣಾ ಪ್ರಕ್ರಿಯೆಗೆ  ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳು ಸೆಲ್ಯೂಟ್ ಹೊಡೆಯುವಂತಿಲ್ಲ, ವಿದೇಯತೆ ತೋರಿಸುವಂತಿಲ್ಲ, ಸಾಮಾನ್ಯ ನಾಗರಿಕರಂತೆ ವ್ಯವಹರಿಸಬೇಕು' ಎಂದು ಮಹಾರಾಷ್ಟ್ರ ಗೃಹ ಸಚಿವಾಲಯ ಸುತ್ತೋಲೆ ಹೊರಡಿಸಿದೆ. ಕರ್ನಾಟಕದಲ್ಲೂ ಇಂತದ್ದೊಂದು ಸುತ್ತೋಲೆ ಹೊರಡಿಸಬೇಕಿದೆ. ಸುತ್ತೋಲೆ ಇಲ್ಲದೇ ಇದ್ದರೂ ವಿಚಾರಣೆಯ ಸಂಬಂಧ BNSS ಸೆಕ್ಷನ್ 35(3) ನೋಟಿಸ್ ನೀಡಲು ಬಂದಿದ್ದ ಪೊಲೀಸ್ ಅಧಿಕಾರಿಯು ಸದ್ರಿ ಪ್ರಕರಣದ 'ಆರೋಪಿ'ಗೆ ಸೆಲ್ಯೂಟ್ ಹೊಡೆಯುವಂತಿಲ್ಲ. ಇದು ಪೊಲೀಸ್ ಸೇವಾ ನಿಯಮದ ಪ್ರಾಥಮಿಕ ಪ್ರಜ್ಞೆ.  ಹಾಗಾಗಿ ತಕ್ಷಣ ಆ ಪೊಲೀಸ್ ಅಧಿಕಾರಿಯನ್ನು ಅಮಾನತ್ತಿನಲ್ಲಿಟ್ಟು, ತನಿಖೆಯನ್ನು ಬೇರೆ ಜಿಲ್ಲೆಗೆ ವರ್ಗಾಯಿಸಬೇಕು.  

ಬಿಜೆಪಿಯ ಬಿ ಎಲ್ ಸಂತೋಷ್ ಬಗ್ಗೆ ಅವರದ್ದೇ ಸೈದ್ದಾಂತಿಕ‌ ಹಿನ್ನಲೆಯ ಮಹೇಶ್ ಶೆಟ್ಟಿ ತಿಮರೋಡಿ ಮಾತನಾಡಿದಾಗ ಉಪಮುಖ್ಯಮಂತ್ರಿಯಾಗಿದ್ದ ಡಿ ಕೆ ಶಿವಕುಮಾರ್ ಅವರು 'ಮಹೇಶ್ ಶೆಟ್ಟಿ ತಿಮರೋಡಿಯವರನ್ನು ಒದ್ದು ಒಳಗೆ ಹಾಕಿ' ಎಂದು ಬಹಿರಂಗವಾಗಿ ಅಬ್ಬರಿಸಿದ್ದರು. ಈಗ ಅವರು ಮುಖ್ಯಮಂತ್ರಿಯಾಗಿದ್ದಾರೆ. ರಾಹುಲ್ ಗಾಂಧಿಯ ವಂಶ ನಿರ್ವಂಶ ಮಾಡುತ್ತೇವೆ ಅಂದ ಶಾಸಕ ಯಶ್ಪಾಲ್ ಸುವರ್ಣ ಎಂಬ ಆರೋಪಿಗೆ ನೋಟಿಸ್ ನೀಡುವ ಪೊಲೀಸರೇ ಸೆಲ್ಯೂಟ್ ಕೊಡ್ತಾರೆ.