"ನಾಟಕದ ಓದು" ಓದಿನಲ್ಲಿಯೂ ಇದೊಂದು ಭಿನ್ನ ಪ್ರಯೋಗ
ಮಂಗಳೂರಿನ ಜರ್ನಿ ಥೇಟರ್ ಗ್ರೂಪ್ ಸಂಸ್ಥೆಯು ಸಂತ ಅಲೋಶಿಯಸ್ (ಪರಿಗಣಿತ) ವಿಶ್ವವಿದ್ಯಾನಿಲಯದ ಸಹಯೋಗದೊಂದಿಗೆ ಜುಲೈ 12, 2026 ಭಾನುವಾರದದಂದು ಎಲ್.ಸಿ.ಆರ್.ಐ. ಸಭಾಂಗಣದಲ್ಲಿ "ನಾಟಕದ ಓದು" ಕಾರ್ಯಕ್ರಮವನ್ನು ಆಯೋಜಿಸಿತ್ತು.
"ಅಶ್ವಪರ್ವ" ನಾಟಕವನ್ನು ಈ ಸಂದರ್ಭದಲ್ಲಿ ಓದಲಾಯಿತು. ಈ ಇದು ಪರಿಣಾಮಕಾರಿಯಾಗಿ ನಾಟಕವನ್ನು ಹೇಗೆ ಓದಬಹುದು ಎಂಬ ಹಿನ್ನೆಲೆಯಲ್ಲಿ ಮಾಡಿದ ಪ್ರಯೋಗವಾಗಿತ್ತು. ಪಾತ್ರ ಮತ್ತು ಸನ್ನಿವೇಶಗಳಿಗೆ ಅನುಗುಣವಾಗಿ ಹಿನ್ನೆಲೆಯಲ್ಲಿ ಪೂರಕ ಸಂಗೀತ ಮತ್ತು ಹಾಡುಗಳನ್ನು ಬಳಸಲಾಗಿತ್ತು.
ನಾಟಕ: ಅಶ್ವಪರ್ವ, ರಚನೆ: ಎಸ್. ರಾಮನಾಥ್
ಓದಿದವರು:
ಅಶ್ವತ್ಥಾಮ: ಡಾ. ಆರ್. ನರಸಿಂಹ ಮೂರ್ತಿ
ನಾರಣಪ್ಪ : ರೋಹನ್ ಉಚ್ಚಿಲ್
ಕುಂಭ : ಕಿರಣ್ ಕುಮಾರ್
ಕಾಲ, ನಿರೂಪಣೆ : ಸುನಿಲ್ ಪಲ್ಲಮಜಲು
ಪಾರಿವಾಳ : ಶರಣ್ಯ ಎನ್. ಟಿ.
ದೀಪ : ಶಶಾಂಕ್ ಐತಾಳ್
ಹಿನ್ನೆಲೆ ಗಾಯನ ಮತ್ತು ಸಂಗೀತ : ಮೇಘನಾ ಕುಂದಾಪುರ ಮತ್ತು ಶಮಿತಾ ಆಚಾರ್ಯ
ಬೆಳಕು: ಸುಧೀಶ್ ಕೂಡ್ಲು
ಸಹಕಾರ: ಶ್ರೀಶ ಕುಮಾರ್
ಧ್ವನಿ: ರಾಜೇಶ್
ದಾಖಖಲೀಕರಣ: ಕಾವ್ಯ ಹೆಬ್ರಿ
ಬಳಿಕ ನಾಟಕ ಮತ್ತು ಪ್ರಯೋಗದ ಕುರಿತು ಸಂವಾದ ಕಾರ್ಯಕ್ರಮ ನಡೆಯಿತು. ಭಾಗವಹಿಸಿದ್ದ ಹಿರಿ-ಕಿರಿಯ ಪ್ರೇಕ್ಷಕರು ಈ ಪ್ರಯೋಗಕ್ಕೆ ಸ್ಪಂದಿಸಿ ಅಭಿಪ್ರಾಯ ವ್ಯಕ್ತಪಡಿಸಿದರು. ಓದಿನ ಪ್ರಯೋಗಗಳು ನಡೆದರೂ ಓದಿನಲ್ಲಿಯೂ ಇದೊಂದು ಭಿನ್ನ ಪ್ರಯೋಗ ಎಂಬ ಅಭಿಪ್ರಾಯ ವ್ಯಕ್ತವಾಯಿತು.