ಮಂಗಳೂರು: ದೇಶದಾದ್ಯಂತ ತೀವ್ರ ಗದ್ದಲ ಸೃಷ್ಟಿಸಿರುವ ‘ನೀಟ್’ (NEET) ಪರೀಕ್ಷಾ ಅಕ್ರಮ ಹಾಗೂ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣವನ್ನು ಖಂಡಿಸಿ, ನವದೆಹಲಿಯಲ್ಲಿ ನಡೆಯುತ್ತಿರುವ ಸರಣಿ ಹೋರಾಟಕ್ಕೆ ಬೆಂಬಲ ಸೂಚಿಸಿ ಮಂಗಳೂರಿನಲ್ಲೂ ಶುಕ್ರವಾರ ಬೃಹತ್ ಪ್ರತಿಭಟನೆ ನಡೆಯಿತು. 'ವಿ ದಿ ಪೀಪಲ್
ಆಫ್ ಇಂಡಿಯಾ - ಮಂಗಳೂರು' ಸಂಘಟನೆಯ ಆಶ್ರಯದಲ್ಲಿ ನಡೆದ ಈ ಬೃಹತ್ ಜಾಗೃತಿ
ಮೆರವಣಿಗೆಯಲ್ಲಿ ಸಾವಿರಾರು ವಿದ್ಯಾರ್ಥಿಗಳು ಮತ್ತು ಯುವಜನರು ಭಾಗವಹಿಸಿದ್ದರು.
ನಗರದ
ಪ್ರಮುಖ ರಸ್ತೆಯಾದ ಹಂಪನಕಟ್ಟೆ ಸಿಗ್ನಲ್ನಿಂದ ಶುರುವಾದ ಪ್ರತಿಭಟನಾ ಮೆರವಣಿಗೆಯು ಕ್ಲಾಕ್ ಟವರ್ ದಾಟಿ ಪುರಭವನದ ಅಂಗಳದವರೆಗೆ ಸಾಗಿತು.
ಕೇಂದ್ರ
ಸರ್ಕಾರದ ವಿರುದ್ಧ ಆಕ್ರೋಶ, ಕಟು ಘೋಷಣೆ
ಮೆರವಣಿಗೆಯಲ್ಲಿ
ಪಾಲ್ಗೊಂಡಿದ್ದ ವಿದ್ಯಾರ್ಥಿಗಳು ಕೇಂದ್ರ ಸರ್ಕಾರ ಹಾಗೂ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ವಿರುದ್ಧ ಸಾಲು ಸಾಲು ಘೋಷಣೆಗಳನ್ನು ಕೂಗಿದರು. ನೈತಿಕ ಹೊಣೆ ಹೊತ್ತು ಶಿಕ್ಷಣ ಸಚಿವರು ತಕ್ಷಣವೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ವಿದ್ಯಾರ್ಥಿಗಳು ಪಟ್ಟು ಹಿಡಿದರು.
ಕೈಯಲ್ಲಿ
ರಾಷ್ಟ್ರಧ್ವಜ ಹಾಗೂ ಪ್ರಧಾನಿ ಮೋದಿ ಮತ್ತು ಶಿಕ್ಷಣ ಸಚಿವರ ಭಾವಚಿತ್ರವಿದ್ದ ಪ್ಲೇಕಾರ್ಡ್ಗಳನ್ನು ಹಿಡಿದಿದ್ದ ಯುವಜನರು, "ನ್ಯಾಯ ಬೇಕು", "ಆಝಾದಿ" ಹಾಗೂ ವ್ಯವಸ್ಥೆಯ ವೈಫಲ್ಯವನ್ನು ಪ್ರಶ್ನಿಸುವ ವೈವಿಧ್ಯಮಯ ಭಿತ್ತಿಪತ್ರಗಳನ್ನು ಪ್ರದರ್ಶಿಸಿ ಆಕ್ರೋಶ ಹೊರಹಾಕಿದರು.
ಮೊಬೈಲ್
ಟಾರ್ಚ್, ಕ್ಯಾಂಡಲ್ ಬೆಳಗಿ ವಿನೂತನ ಪ್ರತಿಭಟನೆ
ಮೆರವಣಿಗೆಯು
ಪುರಭವನದ ಮುಂಭಾಗ ಹಾಗೂ ಬಿ.ಆರ್. ಅಂಬೇಡ್ಕರ್
ಪ್ರತಿಮೆ ಆವರಣ ತಲುಪುತ್ತಿದ್ದಂತೆ ಸಾವಿರಾರು ಪ್ರತಿಭಟನಾಕಾರರು ಒಂದೆಡೆ ಜಮಾಯಿಸಿದರು. ಸಂಜೆಯಾಗುತ್ತಿದ್ದಂತೆ ವಿದ್ಯಾರ್ಥಿಗಳು ತಮ್ಮ ಮೊಬೈಲ್ ಫೋನ್ಗಳ ಟಾರ್ಚ್ ಹಾಗೂ
ಮೇಣದಬತ್ತಿಗಳನ್ನು ಬೆಳಗಿಸುವ ಮೂಲಕ ಅಕ್ರಮದ ವಿರುದ್ಧ ವಿನೂತನ ರೀತಿಯಲ್ಲಿ ಪ್ರತಿಭಟಿಸಿದರು.
ವರ್ಷಪೂರ್ತಿ
ಶ್ರಮಪಟ್ಟು ವ್ಯಾಸಂಗ ಮಾಡಿದ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಆಟವಾಡಲಾಗುತ್ತಿದೆ. ಪರೀಕ್ಷಾ ಅಕ್ರಮದ ಸಂಪೂರ್ಣ ತನಿಖೆಯಾಗಬೇಕು ಮತ್ತು ದೋಹಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದ ಪ್ರತಿಭಟನಾಕಾರರು, ರಾತ್ರಿಯಾಗುತ್ತಿದ್ದಂತೆ ಹೋರಾಟವನ್ನು ಅಂತ್ಯಗೊಳಿಸಿದರು.
