ದೇಶ ವಿದೇಶ

ಜಂತರ್ ಮಂತರ್ ನಲ್ಲಿ NEET ಪ್ರಶ್ನೆ ಪತ್ರಿಕೆ ಸೋರಿಕೆಯ ವಿರುದ್ಧದ ಪ್ರತಿಭಟನೆಯನ್ನು ಹತ್ತಿಕ್ಕಲು ಪ್ರತಿಭಟನಾ ನಿರತರ ಮೇಲೆ ನಡೆದ ಲಾಠಿ ಪ್ರಹಾರ, ಲಾಠಿ ಪ್ರಹಾರಕ್ಕೆ ಜಗ್ಗದೆ ಮುಂದುವರೆದ ಸಂಸತ್ ಚಲೋ.

ಜಂತರ್ ಮಂತರ್ ನಲ್ಲಿ NEET ಪ್ರಶ್ನೆ ಪತ್ರಿಕೆ ಸೋರಿಕೆಯ ವಿರುದ್ಧದ ಪ್ರತಿಭಟನೆಯನ್ನು ಹತ್ತಿಕ್ಕಲು ಪ್ರತಿಭಟನಾ ನಿರತರ ಮೇಲೆ ನಡೆದ ಲಾಠಿ ಪ್ರಹಾರ, ಲಾಠಿ ಪ್ರಹಾರಕ್ಕೆ ಜಗ್ಗದೆ ಮುಂದುವರೆದ ಸಂಸತ್ ಚಲೋ.

ಜಂತರ್ ಮಂತರ್ ನಲ್ಲಿ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡುವಂತೆ ಒತ್ತಾಯಿಸಿ ಕಳೆದ 21 ದಿನಗಳಿಂದ ಉಪವಾಸ ಸತ್ಯಾಗ್ರಹ ಮಾಡುತ್ತಿದ್ದ ಖ್ಯಾತ ಶಿಕ್ಷಣ ತಜ್ಞ, ಪರಿಸರ ಹೋರಾಟಗಾರ, ವಿಜ್ಞಾನಿ ಸೋನಮ್ ವಾಂಗ್ ಚುಕ್ ರನ್ನು ನಿನ್ನೆ ಪೊಲೀಸರು ಬಲವಂತವಾಗಿ ಆಸ್ಪತ್ರೆಗೆ ಕರೆದು ಹೋಗಿದ್ದರ ನಡುವೆಯೂ ನಿಗದಿಪಡಿಸಿದಂತೆ ಇಂದು ಸೋಮವಾರ 20 ನೇ ತಾರೀಕಿನಂದು ಹಮ್ಮಿಕೊಂಡಿದ್ದ ಸಂಸತ್ ಚಲೋ ಕಾರ್ಯಕ್ರಮ ಪ್ರಾರಂಭವಾಗುವ ಸಂದರ್ಭದಲ್ಲಿ ಪ್ರತಿಭಟನೆಯನ್ನು ಹತ್ತಿಕ್ಕುವ ಉದ್ದೇಶದಿಂದ ಪ್ರತಿಭಟನಾಕಾರರ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸಿರುವ ಘಟನೆ ದೆಹಲಿಯ ಜಂತರ್ ಮಂತರ್ ನಲ್ಲಿ ಇಂದು ನಡೆದಿದೆ. 

ಮುಂದುವರಿದು ಪೊಲೀಸರ ಲಾಠಿ ಪ್ರಹಾರಕ್ಕೂ ಜಗ್ಗದ ಪ್ರತಿಭಟನಾಕಾರರು ಪ್ರತಿಭಟನೆ ಸಾವಿರಾರು ಮಂದಿ ಮೆರವಣಿಗೆಯನ್ನು ಸಂಸತ್ ನೆಡೆಗೆ ಮುಂದುವರಿಸಿದ್ದಾರೆ.