ಅಂಕಣ

ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ – 10 ವರ್ಷದ ಮಾನವೀಯ ಸೇವೆಯ ಸುವರ್ಣ ಪಯಣ

ಧೈರ್ಯದ ಧ್ವನಿ ನೀವು, ಭರವಸೆಯ ಬೆಳಕು ನೀವು, ರಕ್ತದ ಹನಿ ಕೊಟ್ಟು ಜೀವ ಉಳಿಸುವ ಗೆಳೆಯರು ನೀವು.


ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ – ಹತ್ತು ವರ್ಷದ ಮಾನವೀಯ ಸೇವೆಯ ಸುವರ್ಣ ಪಯಣ

🖋️ಕಮಲಾಕ್ಷ ಬಜಾಲ್

"ರಕ್ತ ಸಂಬಂಧಿಗಳಾಗೋಣ" ಎಂಬ ಸಂದೇಶವನ್ನು ಕೇವಲ ಘೋಷಣೆಯಾಗಿ ಅಲ್ಲ, ಬದುಕಿನ ಮೌಲ್ಯವಾಗಿ ರೂಪಿಸಿ ಹತ್ತು ವರ್ಷಗಳಿಂದ ನಿರಂತರ ಮಾನವೀಯ ಸೇವೆ ಸಲ್ಲಿಸುತ್ತಿರುವ *ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ* ಸಂಸ್ಥೆಗೆ ಹೃತ್ಪೂರ್ವಕ ಅಭಿನಂದನೆಗಳು. ಒಂದು ಕರೆ ಬಂದಾಗ, ಸಮಯ-ಸ್ಥಳ ನೋಡದೆ ರಕ್ತದಾನಿಗಳನ್ನು ಒಗ್ಗೂಡಿಸಿ ಅಪರಿಚಿತರ ಜೀವ ಉಳಿಸುವ ಕಾರ್ಯವನ್ನು ಈ ಸಂಸ್ಥೆ ನಡೆಸುತ್ತಿದೆ. ಜಾತಿ, ಧರ್ಮ, ಭಾಷೆ, ಪ್ರದೇಶಗಳ ಎಲ್ಲ ಭೇದಗಳನ್ನು ಮೀರಿ ಮಾನವೀಯತೆಯೇ ದೊಡ್ಡ ಸಂಬಂಧ ಎಂಬ ಸಂದೇಶವನ್ನು ಸಮಾಜಕ್ಕೆ ತಲುಪಿಸಿದೆ.

ರಕ್ತದ ಹನಿ ಹರಿದಾಗ, ಬದುಕಿಗೆ ಮೂಡಿತು ನಗು,

ಕರುಣೆಯ ಕೈ ಚಾಚಿದಾಗ, ಕಣ್ಣೀರಾಯಿತು ಮಗು.

ಸಂಬಂಧವಿಲ್ಲದ ಜೀವವೂ, ಬಂಧುವಾಯಿತು ಕ್ಷಣದಲ್ಲೇ,

ರಕ್ತ ಸಂಬಂಧಿಗಳಾಗೋಣ ಎಂಬ ಮಾತು, ಬೆಳಕಾಯಿತು ಮನದಲ್ಲೇ.

ಹತ್ತು ವರ್ಷದ ಈ ಪಯಣವು ಸಾವಿರಾರು ರಕ್ತದಾನ ಶಿಬಿರಗಳು, ಲಕ್ಷಾಂತರ ಜನರಲ್ಲಿ ಜಾಗೃತಿ, ತುರ್ತು ಸಂದರ್ಭಗಳಲ್ಲಿ ನೂರಾರು ಕುಟುಂಬಗಳಿಗೆ ಹೊಸ ಭರವಸೆ ಮತ್ತು ಅಸಂಖ್ಯಾತ ಜೀವಗಳಿಗೆ ಬದುಕಿನ ಅವಕಾಶವನ್ನು ನೀಡಿರುವ ಸೇವೆಯ ಪಯಣವಾಗಿದೆ. ಈ ಹತ್ತು ವರ್ಷದ ಸಾಧನೆ ಇನ್ನಷ್ಟು ಶಕ್ತಿಯಾಗಿ ಬೆಳೆಯಲಿ. ಕರ್ನಾಟಕದ ಪ್ರತಿಯೊಂದು ಜಿಲ್ಲೆ, ಪ್ರತಿಯೊಂದು ಹಳ್ಳಿ, ಪ್ರತಿಯೊಂದು ಯುವ ಹೃದಯಕ್ಕೂ "ರಕ್ತ ಸಂಬಂಧಿಗಳಾಗೋಣ" ಎಂಬ ಸಂದೇಶ ತಲುಪಲಿ. ರಕ್ತದ ಕೊರತೆಯಿಂದ ಯಾವುದೇ ಜೀವ ಕಳೆದುಹೋಗದ ಸಮಾಜ ನಿರ್ಮಾಣವಾಗಲಿ. ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ಸಂಸ್ಥೆಯ ಸಂಸ್ಥಾಪಕರು, ಎಲ್ಲಾ ಪದಾಧಿಕಾರಿಗಳು, ಸ್ವಯಂಸೇವಕರು, ರಕ್ತದಾನಿಗಳು ಮತ್ತು ಬೆಂಬಲಿಗರಿಗೆ ಹೃತ್ಪೂರ್ವಕ ಅಭಿನಂದನೆಗಳು.

"ರಕ್ತ ಸಂಬಂಧಿಗಳಾಗೋಣ – ಜೀವ ಉಳಿಸೋಣ, ಮಾನವೀಯತೆಯನ್ನು ಬೆಳೆಸೋಣ." 

ಜೈ ಭಾರತ್, ಜೈ ಕರ್ನಾಟಕ