ಪ್ರಾದೇಶಿಕ

ನಂದಿನಿ ಪತ್ತಿನ ಸಹಕಾರ ಸಂಘ (ನಿ.) ಕಟೀಲು ಇದರ ನೂತನ ಕಿನ್ನಿಗೋಳಿ ಶಾಖೆಯು 23.08.2026 ಭಾನುವಾರ ಶುಭಾರಂಭ

ಕಟೀಲು ಸುತ್ತಮುತ್ತದ ಗ್ರಾಮೀಣ ಪ್ರದೇಶದ ಜನರಿಗೆ ಬ್ಯಾಂಕಿಂಗ್ ಸೌಲಭ್ಯಗಳು ತ್ವರಿತವಾಗಿ ಸಿಗುವಂತಾಗಬೇಕು, ಜನರ ಆರ್ಥಿಕ ಸಮಸ್ಯೆಗಳನ್ನು ನೀಗಿಸುವಲ್ಲಿ ಬೆನ್ನೆಲುಬಾಗಿ ನಿಲ್ಲಬೇಕು ಎನ್ನುವ ಮಹತ್ತರ ಆಶಯವನ್ನು ಹೊತ್ತು ನಂದಿನಿ ಸಹಕಾರ ಸಂಘ ( ನಿ.) ವನ್ನು 2013-14 ನೇ ಸಾಲಿನಲ್ಲಿ ನಂದಿನಿ ಪತ್ತಿನ ಸಹಕಾರ ಸಂಘವನ್ನು ಸ್ಥಳೀಯರೇ ಆದ ಶ್ರೀ ಶಶಿಧರ್ ಶೆಟ್ಟಿ ಕೆರಮ ಹಿತೈಷಿಗಳೊಂದಿಗೆ ಒಡಗೂಡಿ ಪ್ರಾರಂಭಿಸಿದರು.
ಕಟೀಲು ಪ್ರದೇಶದಲ್ಲಿ ಜನರಿಗೆ ಉತ್ತಮ ಸೇವೆಯನ್ನು ನೀಡುತ್ತಾ ಜನಮನ್ನಣೆ ಗಳಿಸಿದ ಸಂಸ್ಥೆಯಾಗಿ ಮುನ್ನಡೆಯುತ್ತಿರುವ ಸಂದರ್ಭದಲ್ಲಿ ಕಿನ್ನಿಗೋಳಿ ಪ್ರದೇಶದ ಜನರ ಬೇಡಿಕೆ ಹಾಗೂ ಸಂಸ್ಥೆಯ ವ್ಯವಹಾರವನ್ನು ವಿಸ್ತರಿಸುವ ದೃಷ್ಟಿಯಿಂದ ಕಿನ್ನಿಗೋಳಿಯಲ್ಲಿ ಸುಸಜ್ಜಿತ ಶಾಖಾ ಕಛೇರಿಯು ದಿನಾಂಕ 23.08.2026 ರಂದು ಭಾನುವಾರ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಕೆ. ನೀಲಯ್ಯ ಕೋಟ್ಯಾನ್ ರವರ ಅಧ್ಯಕ್ಷತೆ ಹಾಗೂ ಕಟೀಲು ದೇವಾಲಯದ ಆಡಳಿತ ಮಂಡಳಿಯ ಅಧ್ಯಕ್ಷರಾದ ಮತ್ತು ಅನುವಂಶಿಕ ಮೊಕ್ತೇಸರರಾದ ಶ್ರೀ ಕೊಡೆತ್ತೂರುಗುತ್ತು ಸನತ್ ಕುಮಾರ್ ಶೆಟ್ಟಿ ಮತ್ತು ಗಣ್ಯರ ಉಪಸ್ಥಿತಿಯಲ್ಲಿ ಉದ್ಘಾಟನೆಗೊಳ್ಳಲಿದೆ.