80ನೇ ಸ್ವಾತಂತ್ರ್ಯೋತ್ಸವ : ಓಂ ಫ್ರೆಂಡ್ಸ್ ದೈವಾಲಗುಡ್ಡೆ ಕುಂಜತ್ತ್ ಬೈಲ್ ಸಂಘದ ವತಿಯಿಂದ ವಿಜ್ರಂಭಣೆಯಿಂದ ಆಚರಣೆ.
80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಓಂ ಫ್ರೆಂಡ್ಸ್ ದೈವಾಲಗುಡ್ಡೆ ಕುಂಜತ್ತ್ ಬೈಲ್ ಸಂಘದ ವತಿಯಿಂದ ವಿಜ್ರಂಭಣೆಯಿಂದ ಆಚರಿಸಲಾಯಿತು. ಪ್ರವಾಸೋದ್ಯಮ ಇಲಾಖೆಯ ಪ್ರವಾಸಿ ಮಿತ್ರ ಸಿಬ್ಬಂದಿ, ಕನಾ೯ಟಕ ದಲಿತ ಸಂಘರ್ಷ ಸಮಿತಿ ಮಂಗಳೂರು ತಾಲೂಕು ಸಂಚಾಲಕರು, ಪರಿವತ೯ನಾ ಕೋ ಆಪರೇಟಿವ್ ಸೊಸೈಟಿ ಬಜ್ಪೆ ಇದರ ನಿದೇ೯ಶಕರಾದ ರಾಘವೇಂದ್ರ ಇವರು ಧ್ವಜಾರೋಹಣ ಮಾಡಿ ಮಾತಾಡುತ್ತಾ ಹಲವಾರು ರಾಷ್ಟ್ರ ನಾಯಕರ ಹೋರಾಟ, ತ್ಯಾಗ ಬಲಿದಾನದ ಫಲವಾಗಿ ದೇಶಕ್ಕೆ ಸ್ವಾತಂತ್ರ್ಯ ಲಭಿಸಿದೆ. ಸ್ವಾತಂತ್ರ್ಯ ಎಂಬ ಪದಕ್ಕೆ ಚ್ಯುತಿ ಬರದಂತೆ, ದೇಶದಲ್ಲಿ ಅಶಾಂತಿಯನ್ನು ಸೃಷ್ಟಿಸದೆ ಎಲ್ಲರನ್ನೂ ಪ್ರೀತಿಸಿ, ಎಲ್ಲರನ್ನೂ ಗೌರವಿಸಿ, ಸಮಾನತೆಯ ಹಾದಿಯಲ್ಲಿ ನಡೆಯುತ್ತಾ ಎಲ್ಲರೊಂದಿಗೆ ಗೌರವದಿಂದ ಬದುಕು ಸಾಗಿಸೋಣ ಎಂದು ಮಾರ್ಮಿಕವಾಗಿ ನುಡಿದರು.
ಕಾಯ೯ಕ್ರಮದ ಅಧ್ಯಕ್ಷತೆ ವಹಿಸಿದ ಸಂಘದ ಸಂದೀಪ್ ಕುಂಜತ್ತ್ ಬೈಲ್ ಎಲ್ಲರಿಗೂ ಶುಭಾಶಯ ತಿಳಿಸಿದರು. ಅತಿಥಿಗಳಾಗಿ ನಿಶಾಲ್ ಕುಂಜತ್ತ್ ಬೈಲ್, ರಮಾನಾಥ್ ಭಂಡಾರಿ ಕುಂಜತ್ತ್ ಬೈಲ್ (ಗೌರವಾಧ್ಯಕ್ಷರು), ರತ್ನಾಕರ ಶೆಟ್ಟಿ(ಹಿರಿಯ ನಾಗರಿಕರು), ಬಾಲಕೃಷ್ಣ ಪೂಜಾರಿ(ಹಿರಿಯ ನಾಗರಿಕರು) ಉಪಸ್ಥಿತರಿದ್ದರು. ದೀಕ್ಷಾ ಶೆಟ್ಟಿ ಪಡ್ಪು ಕುಂಜತ್ತ್ ಬೈಲ್ ಕಾಯ೯ಕ್ರಮ ನಿರೂಪಿಸಿದರು, ಪ್ರದೀಪ್ ದೈವಾಲಗುಡ್ಡೆ ಧನ್ಯವಾದಗೈದರು.
