ಕರಂಬಾರು : ಕುಸಿದ ಹಳೆ ಸೇತುವೆಯ ಸಮೀಪ ತಾತ್ಕಾಲಿಕ ಪರ್ಯಾಯ ರಸ್ತೆ ನಿರ್ಮಾಣ ಕಾರ್ಯ ಅಂತಿಮ ಹಂತದತ್ತ: ಸಂಚಾರಕ್ಕೆ ಕ್ಷಣಗಣನೆ
🖋️ ಕೃಷ್ಣಾನಂದ ಡಿ.
ತಕ್ಷಣ ಇದನ್ನು ಗಮನಿಸಿದ ಬಜಪೆ ಪಟ್ಟಣ ಪಂಚಾಯತ್ ನ ಅಧ್ಯಕ್ಷರಾದ ಲೋಕೇಶ್ ಪೂಜಾರಿ ಮತ್ತು ಸ್ಥಳೀಯ ಜನಪ್ರತಿನಿಧಿಗಳು, ಶಾಸಕರಿಗೆ, ಜಿಲ್ಲಾಡಳಿತಕ್ಕೆ, ಪೊಲೀಸ್ ಇಲಾಖೆ ಹಾಗೂ ಲೋಕೋಪಯೋಗಿ ಇಲಾಖೆಯ ಗಮನಕ್ಕೆ ತಂದು ಸಂಚಾರಕ್ಕೆ ಪರ್ಯಾಯ ಮಾರ್ಗದ ವ್ಯವಸ್ಥೆಯನ್ನು ಮಾಡಿದ್ದರು.
ಸಂಕಷ್ಟಗೊಳಗಾಗಿದ್ದ ಪ್ರಯಾಣಿಕರು
ಈ ಪರ್ಯಾಯ ಮಾರ್ಗದಲ್ಲ್ಲಿ ಪೊರ್ಕೋಡಿಯಿಂದ ಕರಂಬಾರುವರೆಗಿನ ರಸ್ತೆ ಕಿರಿದಾಗಿತ್ತು, ಇನ್ನು ಕರಂಬಾರನಿಂದ ಹಳೆ ವಿಮಾನ ನಿಲ್ದಾಣದ ರಸ್ತೆ ಅತ್ಯಂತ ಏರಿಳಿತದಿಂದ ಕೂಡಿತ್ತು ಇದು ಬಸ್ಸು ಮತ್ತು ಘನ ವಾಹನಗಳ ಸಂಚಾರಕ್ಕೆ ಅತ್ಯಂತ ಕ್ಲಿಷ್ಟಕರವಾಗಿತ್ತು. ಇದರಿಂದಾಗಿ ಬಹಳಷ್ಟು ಮಂದಿ ವಿದ್ಯಾರ್ಥಿಗಳು ಉದ್ಯೋಗಿಗಳು ನಿತ್ಯ ಪ್ರಯಾಣಿಕರು ಸಂಕಷ್ಟಗೊಳಗಾಗಿದ್ದರು.
ತಾತ್ಕಾಲಿಕ ಪರ್ಯಾಯ ರಸ್ತೆ ನಿರ್ಮಾಣ
ಈ ನಡುವೆ ಸ್ಥಳೀಯ ಬಜಪೆ ಪಟ್ಟಣ ಪಂಚಾಯತ್ ಆಡಳಿತ , ಸ್ಥಳೀಯ ಶಾಸಕರ ಮತ್ತಿತರ ಜನಪ್ರತಿನಿಧಿಗಳ ಮತ್ತು ಜಿಲ್ಲಾಡಳಿತದ ಮುತುವರ್ಜಿಯಿಂದಾಗಿ ಶಾಶ್ವತ ಸೇತುವೆ ಪುನರ್ ನಿರ್ಮಾಣವಾಗುವವರೆಗೆ ಸಂಚಾರಕ್ಕೆ ತಾತ್ಕಾಲಿಕ ಮಾರ್ಗವನ್ನು ಹಳೆ ಸೇತುವೆಯ ಪಕ್ಕದಲ್ಲಿಯೇ ತಾತ್ಕಾಲಿಕ ಪರ್ಯಾಯ ರಸ್ತೆ ನಿರ್ಮಾಣ ಕಾರ್ಯಕ್ಕೆ ಚಾಲನೆಯನ್ನು ಅದೇ ದಿನ ನೀಡಿದ್ದು ಈ ತಾತ್ಕಾಲಿಕ ರಸ್ತೆಯ ನಿರ್ಮಾಣ ಕಾರ್ಯವನ್ನು ಮಂಗಳೂರಿನ ಪ್ರತಿಷ್ಠಿತ ಮುಗ್ರೋಡಿ ಕನ್ಸ್ಟ್ರಕ್ಷನ್ ನವರು ನಿರ್ವಹಿಸುತ್ತಿದ್ದಾರೆ.
ಸಂಚಾರಕ್ಕೆ ಕ್ಷಣಗಣನೆ:
ಈ ತಾತ್ಕಾಲಿಕ ಪರ್ಯಾಯ ರಸ್ತೆಯ ನಿರ್ಮಾಣ ಕಾರ್ಯವು ಅಂತಿಮ ಹಂತ ತಲುಪಿದ್ದು ಇನ್ನೇನು ಇಂಜಿನಿಯರಿಂಗ್ ವಿಭಾಗದ ಅನುಮತಿ ಸಿಕ್ಕಿದ ತಕ್ಷಣ ಸಂಚಾರಕ್ಕೆ ಮುಕ್ತವಾಗಲಿದೆ.



