ನಂದಿನಿ ಪತ್ತಿನ ಸಹಕಾರ ಸಂಘ ಕಟೀಲು ಇದರ 2025-26ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯು ಇಂದು 06-09-2026ರಂದು ಬೆಳಿಗ್ಗೆ ಆಡಳಿತ ಕಚೇರಿಯ ವಠಾರದಲ್ಲಿ ಸಂಘದ ಅಧ್ಯಕ್ಷರಾದ ಶ್ರೀ ಕೆ ನೀಲಯ ಕೋಟ್ಯಾನ್ ರವರ ಅಧ್ಯಕ್ಷತೆಯಲ್ಲಿ ಜರಗಿತು.
2025-26 ನೇ ಸಾಲಿನ ವಾರ್ಷಿಕ ವರದಿಯನ್ನು ಉಪಾಧ್ಯಕ್ಷರಾದ ಶ್ರೀಮತಿ ಬಬಿತಾ ಎಂ. ರವರು ವಾಚಿಸಿದರು, 2024-25ರ ಅಂದಾಜು ಆಯವ್ಯಯಕ್ಕಿಂತ ಹೆಚ್ಚು ಖರ್ಚಾದ ವಿವರವನ್ನು ಸಿಬ್ಬಂದಿಯಾದ ಶ್ರೀಮತಿ ಪ್ರಮೋದರವರು ವಾಚಿಸಿದರು, ಅಂದಾಜು ಆಯವ್ಯಯ ವೆಚ್ಚವನ್ನು ನಿರ್ದೇಶಕರಾದ ಶ್ರೀ ಸೀತಾರಾಮ್ ವಾಚಿಸಿದರು, ಜಮಾ ಖರ್ಚು ತಖ್ತೆಯನ್ನು, ಅನುಪಾಲನಾ ವರದಿಯನ್ನು ಹಿರಿಯ ಸಿಬ್ಬಂದಿ ಶ್ರೀಮತಿ ದಿವ್ಯ ಡಿ ಅಮೀನ್ ವಾಚಿಸಿದರು. ನಿವ್ವಲ ಲಾಭ ವಿಂಗಡಣೆಯನ್ನು ಶ್ರೀಮತಿ ಲತಾ ರವರು ವಾಚಿಸಿದರು. ಸಹಕಾರ ಸಂಘವು ವರದಿ ಸಾಲಿನಲ್ಲಿ 20.48 ಕೋಟಿ ವ್ಯವಹಾರ ನಡೆಸಿ 12.57 ಲಕ್ಷ ಲಾಭಾಂಶಗಳಿಸಿದ್ದು. ಸಹಕಾರ ಸಂಘದ ಅಧ್ಯಕ್ಷರಾದ ಶ್ರೀ ನೀಲಯ ಕೋಟ್ಯಾನ್ ರವರು ಗ್ರಾಹಕರಿಗೆ ಶೇಕಡಾ 09% ಡಿವಿಡೆಂಟ್ ಈ ಸಂದರ್ಭದಲ್ಲಿ ಘೋಷಿಸಿದರು.
ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಅಂತಿಮ ಪರೀಕ್ಷೆಯಲ್ಲಿ ಶೇಕಡ 90 ಕ್ಕಿಂತ ಹೆಚ್ಚು ಅಂಕ ಗಳಿಸಿದ ಸದಸ್ಯರ ಪ್ರತಿಭಾನ್ವಿತ ಮಕ್ಕಳಿಗೆ ಈ ಸಂದರ್ಭದಲ್ಲಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಡಾ.ಶಶಿಕುಮಾರ್, ಕೃಷಿ ಕ್ಷೇತ್ರದಲ್ಲಿ ವಿಜಯ ಶೆಟ್ಟಿ ಅಜಾರ್ ಗುತ್ತು, ಸಾಮಾಜಿಕ ಕ್ಷೇತ್ರದಲ್ಲಿ ಕೃಷ್ಣಾನಂದ ಡಿ ಮುಂತಾದ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಪ್ರಮುಖರನ್ನು ಗುರುತಿಸಿ, ಸನ್ಮಾನಿಸಲಾಯಿತು.
ನೀಟ್ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆಗೈದು ನಿಟ್ಟೆ ಮೆಡಿಕಲ್ ಕಾಲೇಜಿನಲ್ಲಿ ವೈದ್ಯಕೀಯ ಶಿಕ್ಷಣಕ್ಕೆ ಸರಕಾರಿ ಕೋಟದಡಿ ದಾಖಲಾಗುತ್ತಿರುವ ಕುಮಾರಿ ನಿಧಿ ಜೆ ಶೆಟ್ಟಿ ಅವರನ್ನು ಗೌರವಿಸಲಾಯಿತು.
ಸಹಕಾರ ಸಂಘದ ಅಧ್ಯಕ್ಷರಾದ ಅಧ್ಯಕ್ಷರಾದ ಶ್ರೀ ನೀಲಯ ಕೋಟ್ಯಾನ್ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು ವೇದಿಕೆಯಲ್ಲಿ ಆಡಳಿತ ಮಂಡಳಿ ಸದಸ್ಯರು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀ ಶಶಿಧರ್ ಶೆಟ್ಟಿ ಕೆರಮ ಮುಂತಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಪ್ರಾರಂಭದಲ್ಲಿ ಶಶಿಧರ್ ಶೆಟ್ಟಿ ಕೆರಮ ಸ್ವಾಗತಿಸಿದರು, ಶ್ರೀ ಅಮರ್ ಪ್ರಸಾದ ಶೆಟ್ಟಿ ಕಾರ್ಯಕ್ರಮವನ್ನು ನಿರೂಪಿಸಿದರು, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀ ಶಶಿಧರ ಶೆಟ್ಟಿ ಕೆರಮ ವಂದನಾರ್ಪಣೆಗೈದರು.



